Saturday, December 16, 2006

ಘಮ.. ಘಮ.. ಬೇಳೆ ಸಾರು..!!



ನಮಸ್ತೆ , ಹಲೋ, ವಣಕಂ...!!

ಹಾ... ಇಸ್ಟೋಂದಿವ್ಸಾ ನಾನು ಎಲ್ಲೋಗಿದ್ದೆ ಅಂತ ಯೋಚಿಸ್ತಾ ಉಪವಾಸ ಮಾಡ್ತಾಇದ್ದೀರ !!?
ಏನ್ಮಾಡೋದ್ ಹೇಳಿ, ಇತ್ತೀಚೆಗೆ ನಮ್ಮ ಅಡುಗೆ ಮನೆನಲ್ಲಿ ಬಾರೀ ಯುಗಾದಿ ಹಬ್ಬಾನೇ ನಡೀತಾಇದೇ...!!

ಹಿರಿಯರಿಗೆ ಹಾಗು ಕಿರಿಯರಿಗೆ ನನ್ನ ಅನಂತ ವಂದನೆಗಳು...
ನಿಮ್ಮೆಲ್ಲರ ಅಭಿಪ್ರಾಯದ ಪತ್ರಗಳೇ ನನ್ನ ಹೊಟ್ಟೆ ತುಂಬಿಸಿಬಿಟ್ಟಿವೆ ನೋಡಿ...!!

ಮಾತ್ಸಾಕೊ... ನಿಮ್ಮ ಪವಾಡ ತೋರಿಸಿ ಅಂತ ಕೇಳ್ತಾಇದ್ದೀರ ? ಇಗೋ ನೋಡಿ.. ಇಟ್ಟೆ.. ಸ್ಟೋವ್ಮೇಲೆ ಪಾತ್ರೆ...!
ಈ ವಾರದ ಸ್ಪೆಶಲ್ ಎನಪ್ಪ ಅಂದ್ರೆ...!! "ಬೇಳೆ ಸಾರು..". ಏನೊ..!! ಯಾವ ಬೇಳೆ ಅಂತ ಕೇಳಿದ್ರ ? ತೊಗರಿ ಬೇಳೆ ಅನ್ಸುತ್ತೇ,
ಇಲ್ಲಿ ಇಂಗ್ಳಿಶ್ನಲ್ಲಿ ಎನೊ ಹೊಸ ಹೆಸರಿಂದ ಕರಿತಾರಪ್ಪ.. ವಿಚಿತ್ರ ದೇಶ..!!

ನನಗೆ ನಿಜವಾಗ್ಲು ಬೇಳೆ ಸಾರು ಇಸ್ಟು ಚನ್ನಾಗಿರುತ್ತೆ ಅಂತ ಕನಸನ್ನು ಕಂಡಿರ್ಲಿಲ್ಲ ಬಿಡಿ..

ಬನ್ನಿ ಈಗ ನಮ್ಮ ಅಡುಗೆಮನೆಗೆ ಹೋಗೋಣ...!!

ಬೇಕಾಗಿರುವ ಸಾಮಗ್ರಿಗಳು.. :

4 ಕಪ್ಪ್ ಬೇಳೆ.
3 ಈರುಳ್ಳಿ.. ಅದೇ ಕಣ್ಣೀರುರಿಸೋದು...!!
ಸ್ವಲ್ಪ ಎಣ್ಣೆ.
ಸ್ವಲ್ಪ ಸಾಸಿವೆ, ಜೀರ್ಗೆ.ಸ್ವಲ್ಪ ಕೊತ್ತಂಮ್ರಿ ಪುಡಿ.
ಸ್ವಲ್ಪ ಬೆಳ್ಳುಳ್ಳಿ ( 4 ತುಂಡು ಸಾಕು ).

ಮೊದಲಿಗೆ ಕುಕ್ಕರ್ನಲ್ಲಿ ಬೇಳೆ ಮತ್ತೆ ಅಳತೆಗೆ ತಕ್ಕಸ್ಟು ನೀರಿಟ್ಟು ಬೇಳೆಯನ್ನ ಬೇಯಿಸಿ..ಎಸ್ಟೊತ್ತು ಬೇಯಿಸ್ಬೇಕು ಅಂತ ಕೇಳಿದ್ರ.. ! ಸರಿ ಸುಮಾರು ೭ ನಿಮಿಶ.., ಬೇಳೆ ಮೆತ್ತಗಾಗಿವ ತನಕ.

ನಂತರ....!!

ಒಂದು ಸಣ್ಣ ಬಾಯಗಲ ಪಾತ್ರೆಯಲ್ಲಿ ಎಣ್ಣೆಹಾಕಿ ಹಚ್ಚಿದ ಸ್ಟೋವ್ಮೇಲಿಡಿ...
ನಂತರ ಸಾಸಿವೆ ಹಾಕಿ.
ಜೀರ್ಗೆ, ಕೊತ್ತಂಮ್ರಿ ಪುಡಿ, ಜಜ್ಜಿದ ಬೆಳ್ಳುಳ್ಳಿ ಹಾಕಿ.
4 ಕೆಂಪು ಮೆಣಸಿನ ಕಾಯನ್ನು ಹಾಕಿ..

ಸ್ವಲ್ಪ ಸಮಯ ಹುರಿಯಿರಿ..

ನಂತರ ಕತ್ತರಿಸಿದ ಈರುಳ್ಳಿ ಹಾಕಿ ಹುರಿಯಿರಿ (ಕಾಪಿ ಲಿಪ್ ಸ್ಟಿಕ್ ಬಣ್ಣ ಬರೋವರ್ಗು ಸಾಕು).
ನಂತರ ಆಗಲೆ ಬೇಯಿಸಿದ ಬೇಳೆಯನ್ನ ಈ ಪಾತ್ರೆಗೆ ಹಾಕಿ.
ಸ್ವಲ್ಪ ನೀರೊ ಹಾಕಿಪ್ಪ.. ಇಲ್ಲಾಂದ್ರೆ ಬೇಳೆ ಸಾರಗಲ್ಲ... ಬೇಳೆ ಜೆಲ್ಲಾಗುತ್ತೆ, ಬ್ರೆಡ್ಗು ಹಾಕಕ್ಕಾಗಲ್ಲ..!!

ನಂತರ ಒಂದ್ 7.1 ನಿಮಿಶ ಬೇಯಿಸಿ..

ಸುಮ್ಮನೆ ನಿಲ್ಲಬೇಡಿ... ಹಾಗೆ ಇಂಟರ್ನೆಟ್ನಲ್ಲಿ ಎನಾದ್ರು ದೊನ್ಲೊಡ್ ಕೊಡ ಮಾಡ್ತಾಇರಿ..!!

ಇದಾದ ನಂತರ, ಕೆಂಪಗಿರುವ ಬ್ಯಾಡಿಗೆ ಮೆಣಸಿನ ಪುಡಿಹಾಕಿ..
ಬೇಯುಸುವುದನ್ನ ಮುಂದುವರಿಸಿ...!!ಎಲ್ಲದರ ಕೊನೆಗೆ ರುಚಿಗೆ ತಕ್ಕಸ್ಟು "ಟಾಟಾ" ಉಪ್ಪನ್ನ ಹಾಕಿ..

ಪಾತ್ರೆಯನ್ನ ಮುಚ್ಚಿ ನಿಮ್ಮ ಕಂಪ್ಯುಟರ್ನ ಆಪ್ ಮಾಡಿ ಬನ್ನಿ..
ಬಂದ ನಂತರ ನಿಮ್ಮ ಕಣ್ಮುಂದೆ ನೋಡಿ...!!



ಘಮ.. ಘಮ.. ಅಂತಾ ಬೇಳೆ ಸಾರು ಕೈಬಿಸಿ ಕರಿಯುತ್ತೆ..!!

ಬಿಸಿ ಬಿಸಿ "ಬಾಸುಮತಿ" ಅನ್ನದ ಜೊತೆ ಬೇಳೆ ಸಾರನ್ನ ಕಾಕ್ಕೊಂಡು ಚಪ್ಪರ್ಕೊಂಡು ಸವಿಯಿರಿ...!!

ಹೇಳಿಕೊಟ್ಟ ರೀತಿ ಇಸ್ಟವಾಯ್ತು ತಾನೆ.. ?

ಎಂದಿನಂತೆ ಪತ್ರ , ಪ್ಯಕ್ಸು , ಮೇಲು ಎಲ್ಲ ಕಳಿಸ್ತಾಇರಿ...!!

"ನನಗೆ ಹೆಂಡತಿ ಬೆಕೋ ಬೇಡ್ವೋ ಅಂತಾನು ಬರೀರಿಪ್ಪಾ...!!"

ಸರಿ ನಾನು ಹೊರಟೆ.. ಒಲೆ ಮೇಲೆ ಹಾಲಿಟ್ಟಿದ್ದೀನಿ...!!


ನಿಮ್ಮ ಪಾಕಪ್ರಿಯ..!!

-ಯುವಪ್ರೇಮಿ

Tuesday, December 5, 2006

ಊಟ ೧... ಟೊಮ್ಯಾಟೊ ಗೊಜ್ಜು...

ಇದು ನಾನು ಆಸ್ಟ್ರೇಲ್ಯಾಕ್ಕೆ ಬಂದ ಮೇಲೆ ಮಾಡಿದ 2 ಅಡುಗೆ...

ನನ್ನ ಸ್ನೇಹಿತರಿಗೆ South indian ಊಟ ಅಂದ್ರೆ ಬಹಳ ಇಸ್ಟನೊಡಿ... ಅದಕ್ಕೆ ನಾನು ಅಡುಗೆ ಮನೆ ಪಾಲಾದೆ...!!

ನಾನು ಹಿಂದೆ ಯಾವತ್ತು ಅಡುಗೆ ಮಾಡಿರ್ಲಿಲ್ಲ...
ನನಗೆ ಅಡುಗೆಗೆ ಏನು ಸಾಮಾಗ್ರಿ ಬೇಕು ಅಂತಾನು ಗೊತ್ತಿಲ್ಲ... ಕೈನಲ್ಲಿ ಏನಿದ್ರು ಅದನ್ನೆ ಹಾಕ್ತೀನಿ... !!
ಭಯ ಬೇಡಾ ರೀ... ನಾನು ಅಪ್ಪಟ ಚಿನ್ನದಂತ ವೇಜ್ಜು... ( ಒಂದೊಂದ್ಸಲ ಮಾತ್ರ ;-))..

ಬೇಕಿರುವ ಸಾಮಾಗ್ರಿ

೪-೫ ಟೊಮ್ಯಾಟೊ
೭-೮ ಮೆಣಸಿಣ ಕಾಯಿ
೪ ದಪ್ಪ ಈರುಳ್ಳಿ.. ( ಆಸ್ಟ್ರೇಲ್ಯಾ ಈರುಳ್ಳಿ ಆದ್ರೆ ಬಹ ಒಳ್ಳೆದು.. )
೧ ಕಪ ಎಣ್ಣೆ... ಅಂದ್ರೆ ಸೋರ್ಯಕಾಂತಿ ಇಲ್ಲ ಕಡಲೆ ಎಣ್ಣೆಪ್ಪಾ... (ಬೇರೆ ಎಣ್ಣೆನಲ್ಲಿ ಟೊಮ್ಯಾಟೊ ಗೊಜ್ಜು ಬಿರ್ಯಾನಿಯಾಗುತ್ತೆ ಹುಶಾರ್..!!) .
ಸ್ವಲ್ಪ ಸಾಸಿವೆ..
ಸ್ವಲ್ಪ ಕಡಲೆಬೀಜ
ಸ್ವಲ್ಪ ಜೀರ್ಗೆ
ಸ್ವಲ್ಪ ಬೇಳೆ... ಟೊಮ್ಯಾಟೊ ಗೊಜ್ಜು ಖರಂ.. ಖರಂ.. ಅನ್ಬೇಕಲ್ವ ಅದಕ್ಕೆ..!!
ಮತ್ತೆ ಅಡುಗೆ ಪ್ಯಾನ್.. ಸ್ಟೋವ.. ಇದೆಲ್ಲ ಬೇಕೇಬೇಕು...!!

I : ಮೊದಲು ಎಣ್ಣೆಯನ್ನ ಪ್ಯಾನನಲ್ಲಿ ಹಾಕಿ ಬಿಸಿಮಾಡಿ.
ನಂತರ ಸಾಸಿವೆ , ಬೇಳೆ , ಜೀರ್ಗೆ ,ಕಡಲೆಬೀಜ ಏಲ್ಲ ಹಾಕಿ ಹುರಿಯಿರಿ...
ನಂತರ ಈರುಳ್ಳಿ ಹಾಕಿ ಕಾಪಿ ಬಣ್ಣಬರೊವರ್ಗು ಹುರಿಯಿರಿ...
ನಂತರ ಸ್ವಲ್ಪ ಬೆಳ್ಳುಳ್ಳಿ ಹಾಕಿ...
ಇದೆಲ್ಲದರ ನಂತರ ಕತ್ತರಿಸಿದ ಟೊಮ್ಯಾಟೊ ಹಾಕಿ..
ಸ್ವಲ್ಪ ಹೊತ್ತು ಬೇಯಲು ಬಿಡಿ , ಅಂದ್ರೆ ನೀವು ಏಲ್ಲು ಹೋಗ್ಬೇಡಿಪ್ಪಾ..
ಹಾಗೆ ಪ್ಯಾನ್ನಲ್ಲಿ ಕೈಆಡಿಸ್ತಇರಿ...
ಕೊನೆಗೆ ಸ್ವಲ್ಪ ರುಚಿಗೆ ಉಪ್ಪು ಹಾಕಿ...

ಅಲ್ಲಿ ನೋಡಿ ನಿಮ್ಮ ಟೊಮ್ಯಾಟೊ ಗೊಜ್ಜು ತಯಾರು...!!

( ಇದು ನನ್ನ ಸೀಕ್ರೇಟ ಫಾರ್ಮುಲ.. ಯಾರಿಗು ಹೇಳಬೇಡಿ...!! )
ಕೆಳಗಿನ ಚಿತ್ರವನ್ನು ನೋಡಿ... ಬಹಳ ಚನ್ನಾಗಿದೆ...!!



ಕತ್ತರಿಸಿದ ಈರುಳ್ಳಿ..

ಕತ್ತರಿಸಿದ ಟೊಮ್ಯಾಟೊ..


ಕತ್ತರಿಸಿದ ಮೆಣಸಿನಕಾಯಿ..


ಟೊಮ್ಯಾಟೊ ಗೊಜ್ಜು

ನೀವೆ ಹೇಳಿ ಈಗ.. ನನಗೆ ನಿಜವಾಗ್ಲು ಹೆಂಡ್ತಿ ಬೇಕ ?

ಇಸ್ಟವಾಯ್ತು ತಾನೆ...!! ಪತ್ರ ಇಲ್ಲ ಕಾಮೆಂಟನ್ನು ಮಾಡೀಪ್ಪಾ..

-ಯುವಪ್ರೇಮಿ

ಆಡುಗೆ ಮನೆಯಲ್ಲಿ ಈ ಸುಂದರ ಹುಡುಗ...!!

ಹಾ.....!! ಬಹಳ ದಿವಸ ಕಾಯಿಸಿದೆ ಅನ್ಸುತ್ತೆ.. ಸಾರಿ ಕಣ್ರಿ...!!

ಈ ಬ್ಳಾಗ ವಿಷೇಶ ಇಸ್ಟೇ...!!

ನಾನು ಮನೆಯಿಂದ ಬಹಳ ದೊರ.. ಅಂದರೆ ಸಿಕ್ಕಾಪಟ್ಟೆ ದೊರವಿರುವುದರಿಂದ ನನಗೆ ನಾನೆ ಅಡುಗೆ ಮಾಡುವಂತಾಗಿದೆ...!!

ಅದಲ್ಲದೆ ನನಗೆ ಮದುವೆ ಅಂದ್ರೆ ಸ್ವಲ್ಪ ಅಲರ್ಜಿ ಕೊಡ...!! ಅದಕ್ಕೆ ನಾನು ಮದುವೆ ಮಾಡ್ಕೋಳಿಲ್ಲ ಅಂದ್ರು ಒಳ್ಳೆ ಊಟ ಸವಿಬಹುದು ಅಂತ ಸಾದಿಸ್ತೇನೆ.. ಅದಕ್ಕೆ ನಿಮ್ಮ ಸಲಹೆ ಬಹಳ ಅಗತ್ಯ...!!

ಆದಕ್ಕೆ ಕಳೆದ ೨ ತಿಂಗಳಿನಿಂದ ನಾನು ಆಡುಗೆಮಾಡ್ತಐದ್ದೀನಿ...

ನಾನು ಮಾಡುವ ಅಡುಗೆಯ ರುಚಿಯನ್ನ ನಿಮಗು ಸವಿಯ ಬಿಡುವ ಒಂದು ಆಸೆ ಇದೆ..

ನೀವೆಲ್ಲರು ಸವಿತ್ತೀರಾ ಅಂತ ಅಂದ್ಕೋತ್ತೀನಿ...!! ಸರಿನಾ...!! ಅಯ್ಯೋ ಇದು ಯಾವ ಹುಡುಗಿ ಹೆಸರಲ್ಲಪ್ಪ...!! ನಾನು ಹೇಳಿದ್ದು ಸರಿತಾನೆ ಅಂತ...!! (ಈ ಹುಡ್ಗೀರ್ಗೆ ಯಾವ ಹೆಸರೆ ಸಿಗೋಲ್ವ... ಸರಿನಾ.. ಕರಿನಾ ಅಂತ ಇಟ್ಕೋತ್ತಾರೆ..!!).


ಸರಿ ಶುರು ಮಾಡೋಣ...!!