Tuesday, December 5, 2006

ಊಟ ೧... ಟೊಮ್ಯಾಟೊ ಗೊಜ್ಜು...

ಇದು ನಾನು ಆಸ್ಟ್ರೇಲ್ಯಾಕ್ಕೆ ಬಂದ ಮೇಲೆ ಮಾಡಿದ 2 ಅಡುಗೆ...

ನನ್ನ ಸ್ನೇಹಿತರಿಗೆ South indian ಊಟ ಅಂದ್ರೆ ಬಹಳ ಇಸ್ಟನೊಡಿ... ಅದಕ್ಕೆ ನಾನು ಅಡುಗೆ ಮನೆ ಪಾಲಾದೆ...!!

ನಾನು ಹಿಂದೆ ಯಾವತ್ತು ಅಡುಗೆ ಮಾಡಿರ್ಲಿಲ್ಲ...
ನನಗೆ ಅಡುಗೆಗೆ ಏನು ಸಾಮಾಗ್ರಿ ಬೇಕು ಅಂತಾನು ಗೊತ್ತಿಲ್ಲ... ಕೈನಲ್ಲಿ ಏನಿದ್ರು ಅದನ್ನೆ ಹಾಕ್ತೀನಿ... !!
ಭಯ ಬೇಡಾ ರೀ... ನಾನು ಅಪ್ಪಟ ಚಿನ್ನದಂತ ವೇಜ್ಜು... ( ಒಂದೊಂದ್ಸಲ ಮಾತ್ರ ;-))..

ಬೇಕಿರುವ ಸಾಮಾಗ್ರಿ

೪-೫ ಟೊಮ್ಯಾಟೊ
೭-೮ ಮೆಣಸಿಣ ಕಾಯಿ
೪ ದಪ್ಪ ಈರುಳ್ಳಿ.. ( ಆಸ್ಟ್ರೇಲ್ಯಾ ಈರುಳ್ಳಿ ಆದ್ರೆ ಬಹ ಒಳ್ಳೆದು.. )
೧ ಕಪ ಎಣ್ಣೆ... ಅಂದ್ರೆ ಸೋರ್ಯಕಾಂತಿ ಇಲ್ಲ ಕಡಲೆ ಎಣ್ಣೆಪ್ಪಾ... (ಬೇರೆ ಎಣ್ಣೆನಲ್ಲಿ ಟೊಮ್ಯಾಟೊ ಗೊಜ್ಜು ಬಿರ್ಯಾನಿಯಾಗುತ್ತೆ ಹುಶಾರ್..!!) .
ಸ್ವಲ್ಪ ಸಾಸಿವೆ..
ಸ್ವಲ್ಪ ಕಡಲೆಬೀಜ
ಸ್ವಲ್ಪ ಜೀರ್ಗೆ
ಸ್ವಲ್ಪ ಬೇಳೆ... ಟೊಮ್ಯಾಟೊ ಗೊಜ್ಜು ಖರಂ.. ಖರಂ.. ಅನ್ಬೇಕಲ್ವ ಅದಕ್ಕೆ..!!
ಮತ್ತೆ ಅಡುಗೆ ಪ್ಯಾನ್.. ಸ್ಟೋವ.. ಇದೆಲ್ಲ ಬೇಕೇಬೇಕು...!!

I : ಮೊದಲು ಎಣ್ಣೆಯನ್ನ ಪ್ಯಾನನಲ್ಲಿ ಹಾಕಿ ಬಿಸಿಮಾಡಿ.
ನಂತರ ಸಾಸಿವೆ , ಬೇಳೆ , ಜೀರ್ಗೆ ,ಕಡಲೆಬೀಜ ಏಲ್ಲ ಹಾಕಿ ಹುರಿಯಿರಿ...
ನಂತರ ಈರುಳ್ಳಿ ಹಾಕಿ ಕಾಪಿ ಬಣ್ಣಬರೊವರ್ಗು ಹುರಿಯಿರಿ...
ನಂತರ ಸ್ವಲ್ಪ ಬೆಳ್ಳುಳ್ಳಿ ಹಾಕಿ...
ಇದೆಲ್ಲದರ ನಂತರ ಕತ್ತರಿಸಿದ ಟೊಮ್ಯಾಟೊ ಹಾಕಿ..
ಸ್ವಲ್ಪ ಹೊತ್ತು ಬೇಯಲು ಬಿಡಿ , ಅಂದ್ರೆ ನೀವು ಏಲ್ಲು ಹೋಗ್ಬೇಡಿಪ್ಪಾ..
ಹಾಗೆ ಪ್ಯಾನ್ನಲ್ಲಿ ಕೈಆಡಿಸ್ತಇರಿ...
ಕೊನೆಗೆ ಸ್ವಲ್ಪ ರುಚಿಗೆ ಉಪ್ಪು ಹಾಕಿ...

ಅಲ್ಲಿ ನೋಡಿ ನಿಮ್ಮ ಟೊಮ್ಯಾಟೊ ಗೊಜ್ಜು ತಯಾರು...!!

( ಇದು ನನ್ನ ಸೀಕ್ರೇಟ ಫಾರ್ಮುಲ.. ಯಾರಿಗು ಹೇಳಬೇಡಿ...!! )
ಕೆಳಗಿನ ಚಿತ್ರವನ್ನು ನೋಡಿ... ಬಹಳ ಚನ್ನಾಗಿದೆ...!!



ಕತ್ತರಿಸಿದ ಈರುಳ್ಳಿ..

ಕತ್ತರಿಸಿದ ಟೊಮ್ಯಾಟೊ..


ಕತ್ತರಿಸಿದ ಮೆಣಸಿನಕಾಯಿ..


ಟೊಮ್ಯಾಟೊ ಗೊಜ್ಜು

ನೀವೆ ಹೇಳಿ ಈಗ.. ನನಗೆ ನಿಜವಾಗ್ಲು ಹೆಂಡ್ತಿ ಬೇಕ ?

ಇಸ್ಟವಾಯ್ತು ತಾನೆ...!! ಪತ್ರ ಇಲ್ಲ ಕಾಮೆಂಟನ್ನು ಮಾಡೀಪ್ಪಾ..

-ಯುವಪ್ರೇಮಿ

5 comments:

Annapoorna Daithota said...

ಅಧ್ಭುತವಾಗಿದೆ ನಿಮ್ಮ ಅಡುಗೆ..... ನಂಗೂ ಒಂದು ವೀಸಾ ಕೊಡ್ಸಿ ಅಲ್ಲಿಗೆ ಬರೋಕೆ..... ನಿಮ್ಮ ಅಡುಗೆ ರುಚಿ ಪ್ರತ್ಯಕ್ಷವಾಗಿ ಸವಿಯೋಕ್ಕೆ......

ravihara said...

ಗಂಡಸರು ಅಡುಗೆಯಲ್ಲಿ ಎಂದಿದ್ದರೂ ಮೇಲುಗೈ ಅನ್ನೋದನ್ನ ಭೀಮ, ನಳ ಮುಂತಾದವರು ತೋರಿಸಿದ್ದಾರೆ.. ನೀವು ಮತ್ತೊಂದು ಉದಾಹರಣೆಯಾಗಿ ನಿಲ್ಲುವಂತಿದೆ.. ಜಯವಾಗಲಿ... ಅಯ್ಯೋ! ಆದರೇ, ಅವರೆಲ್ಲರಿಗೂ ಮದುವೆಯಾಗಿತ್ತು ಮಾರಾಯ್ರೇ!! ಎಂತಾ ಪಜೀತಿ ನೋಡಿ:-)

bhadra said...

ಇದನ್ನು ಓದಿದ ಮೇಲೆ ನನ್ನ ಪ್ರತಿಕ್ರಿಯೆ ಹೀಗೆದೆ

ನಿಜಕ್ಕೂ ನಿಮಗೆ ಹೆಂಡತಿ ಬೇಡ
ಆದರೆ ಆಕೆಗೆ ನಿಮ್ಮಂತಹ ಗಂಡ ಬೇಕಲೇ ಬೇಕು.

ಬಹಳ ಸೊಗಸಾದ ಖಾನಾವಳಿ

Sushrutha Dodderi said...

paravaagilla maduve maadkolri... hendathige anukoola agotthe...

Anchita said...

ishtu adbuta avaagi aduge maadtira andre neevu maduve aagale beku....(wel girls wil b much happy...he hehe :P)