Saturday, December 16, 2006

ಘಮ.. ಘಮ.. ಬೇಳೆ ಸಾರು..!!



ನಮಸ್ತೆ , ಹಲೋ, ವಣಕಂ...!!

ಹಾ... ಇಸ್ಟೋಂದಿವ್ಸಾ ನಾನು ಎಲ್ಲೋಗಿದ್ದೆ ಅಂತ ಯೋಚಿಸ್ತಾ ಉಪವಾಸ ಮಾಡ್ತಾಇದ್ದೀರ !!?
ಏನ್ಮಾಡೋದ್ ಹೇಳಿ, ಇತ್ತೀಚೆಗೆ ನಮ್ಮ ಅಡುಗೆ ಮನೆನಲ್ಲಿ ಬಾರೀ ಯುಗಾದಿ ಹಬ್ಬಾನೇ ನಡೀತಾಇದೇ...!!

ಹಿರಿಯರಿಗೆ ಹಾಗು ಕಿರಿಯರಿಗೆ ನನ್ನ ಅನಂತ ವಂದನೆಗಳು...
ನಿಮ್ಮೆಲ್ಲರ ಅಭಿಪ್ರಾಯದ ಪತ್ರಗಳೇ ನನ್ನ ಹೊಟ್ಟೆ ತುಂಬಿಸಿಬಿಟ್ಟಿವೆ ನೋಡಿ...!!

ಮಾತ್ಸಾಕೊ... ನಿಮ್ಮ ಪವಾಡ ತೋರಿಸಿ ಅಂತ ಕೇಳ್ತಾಇದ್ದೀರ ? ಇಗೋ ನೋಡಿ.. ಇಟ್ಟೆ.. ಸ್ಟೋವ್ಮೇಲೆ ಪಾತ್ರೆ...!
ಈ ವಾರದ ಸ್ಪೆಶಲ್ ಎನಪ್ಪ ಅಂದ್ರೆ...!! "ಬೇಳೆ ಸಾರು..". ಏನೊ..!! ಯಾವ ಬೇಳೆ ಅಂತ ಕೇಳಿದ್ರ ? ತೊಗರಿ ಬೇಳೆ ಅನ್ಸುತ್ತೇ,
ಇಲ್ಲಿ ಇಂಗ್ಳಿಶ್ನಲ್ಲಿ ಎನೊ ಹೊಸ ಹೆಸರಿಂದ ಕರಿತಾರಪ್ಪ.. ವಿಚಿತ್ರ ದೇಶ..!!

ನನಗೆ ನಿಜವಾಗ್ಲು ಬೇಳೆ ಸಾರು ಇಸ್ಟು ಚನ್ನಾಗಿರುತ್ತೆ ಅಂತ ಕನಸನ್ನು ಕಂಡಿರ್ಲಿಲ್ಲ ಬಿಡಿ..

ಬನ್ನಿ ಈಗ ನಮ್ಮ ಅಡುಗೆಮನೆಗೆ ಹೋಗೋಣ...!!

ಬೇಕಾಗಿರುವ ಸಾಮಗ್ರಿಗಳು.. :

4 ಕಪ್ಪ್ ಬೇಳೆ.
3 ಈರುಳ್ಳಿ.. ಅದೇ ಕಣ್ಣೀರುರಿಸೋದು...!!
ಸ್ವಲ್ಪ ಎಣ್ಣೆ.
ಸ್ವಲ್ಪ ಸಾಸಿವೆ, ಜೀರ್ಗೆ.ಸ್ವಲ್ಪ ಕೊತ್ತಂಮ್ರಿ ಪುಡಿ.
ಸ್ವಲ್ಪ ಬೆಳ್ಳುಳ್ಳಿ ( 4 ತುಂಡು ಸಾಕು ).

ಮೊದಲಿಗೆ ಕುಕ್ಕರ್ನಲ್ಲಿ ಬೇಳೆ ಮತ್ತೆ ಅಳತೆಗೆ ತಕ್ಕಸ್ಟು ನೀರಿಟ್ಟು ಬೇಳೆಯನ್ನ ಬೇಯಿಸಿ..ಎಸ್ಟೊತ್ತು ಬೇಯಿಸ್ಬೇಕು ಅಂತ ಕೇಳಿದ್ರ.. ! ಸರಿ ಸುಮಾರು ೭ ನಿಮಿಶ.., ಬೇಳೆ ಮೆತ್ತಗಾಗಿವ ತನಕ.

ನಂತರ....!!

ಒಂದು ಸಣ್ಣ ಬಾಯಗಲ ಪಾತ್ರೆಯಲ್ಲಿ ಎಣ್ಣೆಹಾಕಿ ಹಚ್ಚಿದ ಸ್ಟೋವ್ಮೇಲಿಡಿ...
ನಂತರ ಸಾಸಿವೆ ಹಾಕಿ.
ಜೀರ್ಗೆ, ಕೊತ್ತಂಮ್ರಿ ಪುಡಿ, ಜಜ್ಜಿದ ಬೆಳ್ಳುಳ್ಳಿ ಹಾಕಿ.
4 ಕೆಂಪು ಮೆಣಸಿನ ಕಾಯನ್ನು ಹಾಕಿ..

ಸ್ವಲ್ಪ ಸಮಯ ಹುರಿಯಿರಿ..

ನಂತರ ಕತ್ತರಿಸಿದ ಈರುಳ್ಳಿ ಹಾಕಿ ಹುರಿಯಿರಿ (ಕಾಪಿ ಲಿಪ್ ಸ್ಟಿಕ್ ಬಣ್ಣ ಬರೋವರ್ಗು ಸಾಕು).
ನಂತರ ಆಗಲೆ ಬೇಯಿಸಿದ ಬೇಳೆಯನ್ನ ಈ ಪಾತ್ರೆಗೆ ಹಾಕಿ.
ಸ್ವಲ್ಪ ನೀರೊ ಹಾಕಿಪ್ಪ.. ಇಲ್ಲಾಂದ್ರೆ ಬೇಳೆ ಸಾರಗಲ್ಲ... ಬೇಳೆ ಜೆಲ್ಲಾಗುತ್ತೆ, ಬ್ರೆಡ್ಗು ಹಾಕಕ್ಕಾಗಲ್ಲ..!!

ನಂತರ ಒಂದ್ 7.1 ನಿಮಿಶ ಬೇಯಿಸಿ..

ಸುಮ್ಮನೆ ನಿಲ್ಲಬೇಡಿ... ಹಾಗೆ ಇಂಟರ್ನೆಟ್ನಲ್ಲಿ ಎನಾದ್ರು ದೊನ್ಲೊಡ್ ಕೊಡ ಮಾಡ್ತಾಇರಿ..!!

ಇದಾದ ನಂತರ, ಕೆಂಪಗಿರುವ ಬ್ಯಾಡಿಗೆ ಮೆಣಸಿನ ಪುಡಿಹಾಕಿ..
ಬೇಯುಸುವುದನ್ನ ಮುಂದುವರಿಸಿ...!!ಎಲ್ಲದರ ಕೊನೆಗೆ ರುಚಿಗೆ ತಕ್ಕಸ್ಟು "ಟಾಟಾ" ಉಪ್ಪನ್ನ ಹಾಕಿ..

ಪಾತ್ರೆಯನ್ನ ಮುಚ್ಚಿ ನಿಮ್ಮ ಕಂಪ್ಯುಟರ್ನ ಆಪ್ ಮಾಡಿ ಬನ್ನಿ..
ಬಂದ ನಂತರ ನಿಮ್ಮ ಕಣ್ಮುಂದೆ ನೋಡಿ...!!



ಘಮ.. ಘಮ.. ಅಂತಾ ಬೇಳೆ ಸಾರು ಕೈಬಿಸಿ ಕರಿಯುತ್ತೆ..!!

ಬಿಸಿ ಬಿಸಿ "ಬಾಸುಮತಿ" ಅನ್ನದ ಜೊತೆ ಬೇಳೆ ಸಾರನ್ನ ಕಾಕ್ಕೊಂಡು ಚಪ್ಪರ್ಕೊಂಡು ಸವಿಯಿರಿ...!!

ಹೇಳಿಕೊಟ್ಟ ರೀತಿ ಇಸ್ಟವಾಯ್ತು ತಾನೆ.. ?

ಎಂದಿನಂತೆ ಪತ್ರ , ಪ್ಯಕ್ಸು , ಮೇಲು ಎಲ್ಲ ಕಳಿಸ್ತಾಇರಿ...!!

"ನನಗೆ ಹೆಂಡತಿ ಬೆಕೋ ಬೇಡ್ವೋ ಅಂತಾನು ಬರೀರಿಪ್ಪಾ...!!"

ಸರಿ ನಾನು ಹೊರಟೆ.. ಒಲೆ ಮೇಲೆ ಹಾಲಿಟ್ಟಿದ್ದೀನಿ...!!


ನಿಮ್ಮ ಪಾಕಪ್ರಿಯ..!!

-ಯುವಪ್ರೇಮಿ

3 comments:

Annapoorna Daithota said...

ಪಾಕಪ್ರಿಯಾ... ಅಲ್ಲಲ್ಲ ಯುವಪ್ರೇಮಿ.....
ನಿಮಗೆ ಖಂಡಿತಾ ಹೆಂಡತಿ ಬೇಕು... ಇಲ್ಲಾಂದ್ರೆ ಇಂಥಾ ಅಡುಗೆಗಳ ರುಚಿ ನೋಡೋರು ಯಾರು !!!

..... said...

nin girl friends ella punya maadavre kanappa...nangoo kalisi kodo....nin haage naanoo klkothini...aadre, nenapitko...nange hendti beku...

pravsr said...

ಸಾನ್ ಫ್ರಾನ್ಸಿಸ್ಕೋದಲ್ಲಿ ವಾಸವಾಗಿರುವ ಕನ್ನಡಿಗ ಹುಡುಗ ನಾನು. ನನಗೂ ಹೆಂಡತಿ ಬೇಡ. ಆದರೆ ನಂಗೆ ನಿಮ್ಮಂಥ ಗಂಡ ಬೇಕು. :)