Friday, June 27, 2008

ರಾಗಿ ಮುದ್ದೆ ಮಿಶಿನ್...! Raagi cookie machine..!!

ಬರುತ್ತಿದೆ ರಾಗಿ ಮುದ್ದೆ ಮಾಡೊ ಮಿಶಿನ್........! ಹೆಂಗಸರೆಲ್ಲ ಬಹುಶಃ ಗಾಬರಿಯಾದಂತ ಕಾಣ್ತಾಯಿದೆಯಲ್ಲ........!!

ಹೌದು, ಮುದ್ದೆ ಮಾಡೊ ಯಂತ್ರ ಬಂದರೆ ಹೆಂಗಸರಿಗೆ ಅರ್ಧ ಗೇಟ್ ಪಾಸ್ ಕೊಟ್ಟ ಹಾಗೆ ಅಲ್ವೆ ? (ತಮಾಶೆಗೆ ಹೇಳಿದೆ, ನನ್ನನ್ನುತರಾಟೆಗೆ ತೆಗೆದುಕೊಳ್ಳಬೇಡಿ ಪ್ಲೀಸ್...!!) Smiling

ಕರ್ನಾಟಕದಲ್ಲಿನ ಎಲ್ಲ ಜಿಲ್ಲೆಯಲ್ಲು ರಾಗಿ ಮುದ್ದೆ ಅಷ್ಟು ಪ್ರಸಿದ್ದಿ ಇಲ್ಲವೆಂಬುದು ನನಗೆ ಬಂದಂತಹ ಸುದ್ದಿ.
ಉತ್ತರ ಕರ್ನಾಟಕದಲ್ಲಿ ಜೋಳದ ರೊಟ್ಟಿಗೆ ಬಹಳ ಪ್ರಸಿದ್ದಿ ಇದೆ ಹಾಗೆಯೇ ಕರಾವಳಿಯಲ್ಲಿ ಇಡ್ಲಿ,ದೋಸೆ ಹಾಗು ಹಬೆಯಲ್ಲಿ ಮಾಡಿದಪದಾರ್ಥಗಳು ಪ್ರಸಿದ್ದಿ ಅಂತಲೊ ಕೇಳಿದ್ದೇನೆ.
ಆದರೆ ನಮ್ಮ ದಕ್ಷಿಣ ಕರ್ನಾಟಕದಲ್ಲಿ ರಾಗಿ ಮುದ್ದೆ ಎಂದರೆ ಮನೆಯಲ್ಲಿನ ಮಂದಿಯ ಮೈ ಪುಳಕವಾಗುತ್ತದೆ. ಅಂತೆಯೆ ಪ್ರಾಂತದ ವಧುವರಾನ್ವೇಷಣೆಯಲ್ಲಿನ ಸೆರಮಾಲೆಯ ಪ್ರಶ್ನಾವಳಿಯಲ್ಲಿ ಹುಡುಗಿಗೆ ರಾಗಿ ಮುದ್ದೆ ಮಾಡಲು ಬರುವುದೆ ಎನ್ನುವುದೊಕೊಡ ಒಂದು.
ಮುದ್ದೆ ಮಾಡಲು ಬರುವುದಿಲ್ಲ ಅಂದ್ರೆ ಹುಡುಗಿಯನ್ನು ಬಹಳ ಸ್ಟೈಲಿಶ್ ಅಂಡ್ ಮಾಡರ್ನ್ ಅಂತಲು ಹಲವು ಬಾರಿ ಹೆಸರಿಸಲಾಗಿತಿರಸ್ಕರಿಸಲಾಗುತ್ತದೆ. Sad

(ದಯವಿಟ್ಟು ಕರ್ನಾಟಕವನ್ನು ರಾಗಿ ಮುದ್ದೆ ತರಹ ಕಿತ್ತು ವಿಂಗಡಿಸಿದೆ ಎಂದು ಶಪಿಸ ಬೇಡಿ...!!)

ಅದಲ್ಲದೆ ರಾಗಿ ಮುದ್ದೆ ಎಂದರೆ ಗಂಡಸರಿಗೊಂತು ಗುಂಡು ಹಾಕಿದಷ್ಟು ಗಮ್ಮತ್ತಿರುವ ತೀರ್ಥದಂತೆ. ಅದಕ್ಕಾಗಿ ನಮ್ಮ ಹುಡುಗರುರಾಗಿ ಮುದ್ದೆ ಮಾಡುವ ಮಡದಿಯನ್ನ ನೀಡು ತಂದೆ ಎನ್ನುತ್ತ ಕನಸಿನ ಮನಸಿನಲ್ಲಿ ದೇವರಲ್ಲಿ ಉರುಳುಸೇವೆಯನ್ನುಮಾಡುತ್ತಿರುತ್ತಾನೆ.

ರಾಗಿ ಮುದ್ದೆಯನ್ನು ಕೇವಲ ಮಾಡಲು ಬಂದರೆ ಸಾಲದು, ಸರಿಯಾಗಿ ಗುಂಡಾಕಾರದಲ್ಲಿ ಗಂಟುಗಳಿಲ್ಲದೆ ಕಿತ್ತು ತಿನ್ನಲು ಬಹುಸುಲಭವೆನಿಸುವಂತೆ ಮಾಡಬೇಕು.ಆದರೆ ಈಗಿನ ಯುಗದಲ್ಲಿ ಹುಡುಗಿಯರು ರಾಗಿಯನ್ನೆ ಮರೆತಿರುವುದರಿಂದ ಮುದ್ದೆ ಎಲ್ಲಿಬಂದೀತು ಹೇಳಿ. Shocked

ಇಂತಹ ಕಟು ಸತ್ಯವನ್ನು ನುಂಗಿ, ರಾಗಿಮುದ್ದೆಯನ್ನು ನುಂಗಲು ಆಗದಕ್ಕೆ ವ್ಯಥೆ ಪಡುತ್ತಲಿರುವ ನಮ್ಮ ನಿಮ್ಮಂತಹ ಅವಿವಾಹಿತಹುಡುಗರನ್ನು ಶ್ರೀ ರಾಗಿ ಗುಡ್ಡ ಆಂಜನೇಯ ಸ್ವಾಮಿಯೇ ಕಾಪಾಡಬೇಕು. Sad

ಆದರೆ ಹೆದರ ಬೇಡಿ ಗೆಳೆಯರೆ, ನಾನಿರುವುದೆ ನಿಮಗಾಗಿ....!! Eye-wink

ನಾನು ಈಗತಾನೆ ನನ್ನ ಒಬ್ಬ ಕ್ಲೈಂಟ್ ಹತ್ತಿರ ಮಾತನಾಡುತಿದ್ದೆ. ಆತ ನನಗೆ ತನ್ನ ಸಾಪ್ಟವೇರ್ ಮಾಡ್ಯುಲ್ ಮುಗಿದಿದೆಯೇ ಎಂದುಕೇಳಿದರು, ಅದಕ್ಕ ನಾನು "ಏನು ಮಾಡ್ಯುಲ್ ಮುಗಿಯೋದ ?, ನಿಮ್ಮ ಮಾಡ್ಯುಲ್ ಏನು ರಾಗಿ ಮುದ್ದೆ ಮಾಡಿದಷ್ಟು ಸುಲಭವೇ...!" (ನನಗೆ ರಾಗಿ ಮುದ್ದೆ ಮಾಡಲು ಸ್ವಲ್ಪವೊ ಕಷ್ಟವಿಲ್ಲ, ಅದಕ್ಕೆ ಹೀಗೆ ಹೇಳಿದ್ದು) ಎಂದೆ.
ಅದಕ್ಕೆ ನನ್ನ ಕ್ಲೈಂಟ್ "ರಾಗಿ ಮುದ್ದೆ ಮಾಡಲು ಯಂತ್ರಗಳು ಇಲ್ಲವೆ ದೊಡ್ಡ ದೊಡ್ಡ ಹೋಟಲ್ ನಲ್ಲಿ ಅಂದರು"..!

ಅವರ ಮಾತು ನಿಜ, ದೊಡ್ಡ ದೊಡ್ಡ ಹೋಟಲ್ ನಲ್ಲಿ ರಾಗಿ ಮುದ್ದೆ ಮಾಡುವ ಯಂತ್ರವಿದೆ ಆದರೆ ಅದು ಬರೆ ಅರ್ಧ ಕೆಲಸವನ್ನುಮಾಡುತ್ತದೆ. ಅಂದರೆ ಯಂತ್ರಗಳು ಬರೆ ಕುದಿಯುವ ರಾಗಿ ಹಿಟ್ಟನ್ನು ತಿರುಗುವ ಕೆಲಸವನ್ನು ಮಾಡುತ್ತದೆ.ಆದರೆ ದೊಡ್ಡ ದೊಡ್ಡಹೋಟಲ್ ನಲ್ಲಿ ಇರುವ ಯಂತ್ರಕ್ಕು ನಮಗೊ ಏನು ಸಂಬಂಧ ? ನಾವು ಪ್ರತಿ ದಿವಸ ಹೋಟಲ್ಗೆ ಹೋಗೊದಕ್ಕೆ ಆಗೊದಿಲ್ಲ ಅಲ್ವ ?? Shocked

ಅದಕ್ಕೆ ನನ್ನ ಮಂಡೆಯಲ್ಲಿ ಮೆಲ್ಲನೆ ಮೊಡಿದ ಮಂತ್ರ ಏನು ಗೊತ್ತೆ ? ಅದೆ ನಾವು ಏಕೆ ಒಂದು ಕಂಪ್ಯಾಟಿಬಲ್ ಅಂಡ್ ಮೊಬೈಲ್ರಾಗಿ ಮುದ್ದೆ ಮಾಡುವ ಯಂತ್ರವನ್ನು ಕಂಡುಹಿಡಿಯ ಬಾರದು ಎಂದು.
ನೀವು ಕೇಳಬಹುದು, ರಾಗಿ ಮುದ್ದೆ ಏನು ಪ್ರಪಂಚದ ತಿನಿಸು ಅಲ್ಲವಲ್ಲ, ಅದಕ್ಕೆ ಅಷ್ಟು ಕರ್ಚು ಮಾಡಿ ರಿಸರ್ಚ್ ಮಾಡಿ ಯಂತ್ರ ಯಾಕೆಅಂತ..!
ಆದರು ಅಂತದೊಂದು ಯಂತ್ರವಿದ್ದರೆ ಹೇಗಿರುತ್ತದೆ , ಅದರಿಂದ ನಮ್ಮ ದೇಹಾರೋಗ್ಯ ಹೇಗಿರುತ್ತದೆ ಅಂತ ಯೋಚನೆ ಮಾಡಿ..! Smiling

ಯಂತ್ರದ ಆಕಾರ ಮತ್ತು ಕಾರ್ಯವೈಕರಿ:

raagi mudde machine

) ರಾಗಿ ಮುದ್ದೆ ಮಾಡುವ ಯಂತ್ರವು ನಮ್ಮ ಓವನ್ ಗಿಂತ ಸ್ವಲ್ಪವೆ ಅಗಲ ಅಳತೆಯುಳ್ಳದ್ದಾಗಿರಬೇಕು.
) ಯಂತ್ರವು ದಬ್ಬಾಕಾರದಲ್ಲಿ ಇರಬೇಕು.
) ಯಂತ್ರದ ಮೇಲ್ಬಾಗದಲ್ಲಿ ಬಾಯಿ ಇರಬೇಕು.
) ಮೊದಲನೆ ಬಾಯಿಯಲ್ಲಿ ರಾಗಿ ಹಿಟ್ಟು ಹಾಕಲು.
) ಎರಡನೆ ಬಾಯಿಯಲ್ಲಿ ಯಂತ್ರವೇ ನಿಗದಿ ಪಡಿಸಿರುವ ನಿರ್ದಿಷ್ಟ ಅಳತೆಯ ನೀರು ಸುರಿಯಲು (ಮುದ್ದೆ ಗಂಜಿಯಗುವುದನ್ನುತಡೆಯಲು ಇದು ಬಹಳ ಮುಖ್ಯ).
) ಯಂತ್ರದ ಮುಂಬಾಗದಲ್ಲಿ ರಾಗಿ ಮುದ್ದೆ ತಯಾರಾಗಿ ಹೊರಬರಲು ಬಾಯಿ ಇರಬೇಕು.
) ಯಂತ್ರವು ನಮ್ಮ ಸ್ಟಾರ್ಬಗ್ಸ್ ಕಾಫ಼ಿ ವೆಂಡಿಂಗ್ ಯಂತ್ರದ ತರಹ ಮೇಲೆ ರಾಗಿ ಹಾಕಿ ನೀರು ಹಾಕಿದರೆ, ಸ್ವಲ್ಪ ಸಮಯದನಂತರ ಬಿಸಿ ಬಿಸಿ ಮುದ್ದೆಯನ್ನು ತಿರುಪತಿ ಲಾಡು ಇಟ್ಟಂತೆ ನಮ್ಮ ಕೈಗೆ ಇಡಬೇಕು.

ಇಂತಹ ಒಂದು ಯಂತ್ರವು ನಮ್ಮ ಅವಿವಾಹಿತ ಹುಡುಗರಿಗೆ ಒಂದು ವರದಾನವಾಗುತ್ತದೆ ಅಲ್ಲವೆ ? Smiling

ಯಂತ್ರದಿಂದ ಅತಿ ಹೆಚ್ಚಿನ ರೀತಿಯಲ್ಲಿ ಹೊಟ್ಟೆಗೆ, ನಾಡಿಗೆ, ದೇಶಕ್ಕೆ ಮತ್ತು ಪ್ರಪಂಚಕ್ಕೆ ಬಹಳ ಉಪಯೋಗವಿದೆ ರೀ......!!

ಯಂತ್ರದಿಂದಾಗುವ ಉಪಯೋಗಗಳು :

) "ಅಮೇರಿಕಾಕೆ ಬಂದ್ರು ಅನ್ನಕ್ಕೆ ಅತ್ರಂತೆ" ನೋಡಿ. ನಮಗೆ ರಾಗಿ ಮುದ್ದೆ ಸಿಗಬಹುದಿದ್ದರೆ ನಾವು ಏಕೆ ಅನ್ನಕ್ಕೆ ಮೊರೆಹೋಗಬೇಕು. ರಾಗಿ ಇಂದ ಅನ್ನಕ್ಕೆ ಅಂಟಿರುವ ಬೇಲೆಯ ಕಳಂಕ ತಪ್ಪುತ್ತದೆ. Smiling
) ಹೆಚ್ಚಾಗಿ ರಾಗಿ ಕರ್ನಾಟಕದವರು ಮಾತ್ರವೆ ಉಪಯೋಗಿಸುವುದರಿಂದ, ನಾವು ಉಪಯೋಗಿಸದ ಅನ್ನವನ್ನು ಆಫ಼್ರಿಕಾದಂತಹಕಂಡಗಳಲ್ಲಿ ಹಸಿವಿನಿಂದ ಪ್ರಾಣ ಬಿಡುತ್ತಿರುವವರಿಗೆ ವಿತರಿಸಬಹುದು. ಇದರಿಂದ ಪ್ರಪಂಚದ ಆಹಾರ ಕೊರತೆ ನೀಗುತ್ತದೆ ಅಲ್ಲವೆ ? Smiling
) ನಾರಿ ಮಣಿಗಳು ಮುದ್ದೆ ಮಾಡಲು ಬರದುದಕ್ಕೆ ತಮ್ಮ ಪತಿಯರಿಂದ ರಾಗಿ ತಿರುಗುವ ಕೋಲಿನಿಂದ ಒದೆ ತಿನ್ನುವ ಸ್ತಿತಿತಪ್ಪುತ್ತದೆ. Sad
) ಎಲ್ಲದಕಿಂತ ಮಿಗಿಲಾಗೆ, ಗಂಡಸರು ರಾಗಿ ಮುದ್ದೆಗಾಗಿ ಹೆಂಗಸರ ಮೊರೆ ಹೋಗಬೇಕಾಗಬಹುದಾದ ಎಲ್ಲ ಸಂದರ್ಭವನ್ನುತಪ್ಪಿಸುತ್ತದೆ. ಇದರಿಂದ ಗಂಡಸರು ಸೆಲ್ಪ್ ಡಿಪೆಂಡೆಂಟ್ ಆಗುತ್ತಾರೆ. Smiling
) ಇಂತಹ ರಾಗಿ ಮುದ್ದೆ ಯಂತ್ರದಿಂದ ಜನಸ್ಯಂಖೆ ನಿಯಂತ್ರಣ ಕೋಡ ಮಾಡಬಹುದುಪ್ಪ. ಹೇಗೆ ಅಂದ್ರ ? Shocked
ಮದುವೆಯಾದರೆ ತಾನೆ ಜನಸ್ಯೆಂಖೆ ಹೆಚ್ಚುವ ಪ್ರಮೇಯ ? ಇಂತಹ ಒಂದು ರಾಗಿ ಮುದ್ದೆ ಯಂತ್ರವನ್ನು ಇಟ್ಟುಕೊಂಡ ನಮ್ಮಹುಡುಗರು ಕಿರಿಯ ವಯಸಿನಲ್ಲೆ ಮದುವೆಗೆ ಗಂಟುಬೀಳುವುದು ತಪ್ಪುತ್ತದೆ ಅಲ್ಲವೆ ? Eye-wink

ನೋಡಿ, ಯೋಚನೆ ಮಾಡಿ.
ನಾವು ರಾಗಿ ಮುದ್ದೆ ಮೋಹಿತರನೆಲ್ಲ ಒಂದೆಡೆ ಒಟ್ಟುಗೊಡಿಸಿ ಸಂಘ ಕಟ್ಟಿ ರಾಗಿ ಮುದ್ದೆ ಡೆವಲಪ್ಮೆಂಟ್ ಟೀಮ್ ಮಾಡಿಕೊಳ್ಳೋಣ. Smiling

ಇಂತಹ ಒಂದು ಪ್ರಪಂಚಕ್ಕೆ ಹಿತಬಯಸುವ ಯಂತ್ರವನ್ನು ಮಾಡಲು ನಮ್ಮ ಯಡಯೊರಪ್ಪ ರಿಂದ ರಾಜ್ಯದ ಬಡ್ಜಟ್ ನಲ್ಲಿ ಒಂದಷ್ಟುದುಡ್ಡು ಕೊಡ ಬಿಡುಗಡೆ ಮಾಡಲು ಮನವಿ ಮಾಡಿಕೊಳ್ಳೋಣ. Smiling

ನೀವು ಏನ್ಹೇಳ್ತೀರಿ ??

ಹೆಂಗಸರು "ಅಬ್ಬ ನಮ್ಮ ಕೈಗೆ ಬಿಡುಗಡೆ ಸಿಗ್ತು" ಅಂತ ಅಂದ್ಕೊಬೇಡಿ. ನಾವು ಇನ್ನು ಸಾರು ಮಾಡುವ ಯಂತ್ರ ಮಾಡಿಲ್ಲ. ಅದುಇನ್ನೊ ನಿಮ್ಮ ಜವಾಬ್ದಾರಿಯೆ ಅಲ್ಲವೆ. (ಬೇಸರ ಮಾಡ್ಕೊಬೇಡಿ ಪ್ಲೀಸ್..!)

ಇನ್ನೊಂದು ಮುಖ್ಯ ವಿಚಾರ : ಐಡಿಯಾ ತಂದಿಟ್ಟ ನಮಗೆ ಯಂತ್ರ ತಯಾರಿಸುವ ಮುನ್ನ ಪೇಟೆಂಟ್ ತರಹ ಒಂದಷ್ಟು ಹಣವನ್ನುಕೊಡಬೇಕುಪ್ಪ. ಸರಿನಾ....!

[ನಾನು ಮೇಲೆ ಬರೆದಿರುವುದರಲ್ಲಿ ಎಲ್ಲವು ಸತ್ಯವಿದೆ..! ಆದಕಾರಣ ಮೇಲೆ ಹೇಳಿರುವುದಕೆಲ್ಲ ನಾನು ಮಾತ್ರವೇಜವಾಬ್ದಾರನು, ನನ್ನ ಕಂಪ್ಯುಟರ್ ಅಲ್ಲ]
-ಯುವಪ್ರೇಮಿ

5 comments:

Annapoorna Daithota said...

Sakhatth yantra !!
khanditha patent maadsokolli :)

ಯುವಪ್ರೇಮಿ said...

thanks aaaa...!

ee machine maadidmele nimge ondu Raagi mudde free...! ;)

Shree said...

ಏನ್ರೀ ಇದು? ಏನೋ ಯಂತ್ರ ಆಗ್ಯೇ ಬಿಟ್ಟಿದೆ, ಎಲ್ಲಿ ಕೊಂಡುಕೊಳ್ಳೋದು ಅಂತ ನೋಡೋಣ ಅಂತ ಓದಿದ್ರೆ ಏನೂ ಇಲ್ವಲ್ರೀ! ನಂಗೆ ರಾಗಿ ಮುದ್ದೆ ಇಷ್ಟ, ಮಾಡಲು ತಿಳಿಯದು. ನಂಗೆ ಖಂಡಿತ ಉಪಕಾರ ಆಗ್ತದೆ ಈ ಯಂತ್ರ ಬಂದ್ರೆ.

Anchita said...

Raagi machine tumba chenagide kanri..but nange RAAGI kinta BENNE tumba ishta kanri...

yenaadru BENNE MACHINE maadokke aagutaa anta swalpa nodtira ... :P

ಚುಕ್ಕಿಚಿತ್ತಾರ said...

ಗಾಬರಿಯಾಗ್ತಿದೆ....ನಿಮ್ಮ ಯ೦ತ್ರ ನೋಡಿ...

ಬರಹ ಚನ್ನಾಗಿದೆ...